ಇಲೋಡಿಯ
ಹೈಡ್ರೊಕಾರಿಟೇಸಿ ಕುಟುಂಬದ ಒಂದು ಸಸ್ಯ. ಬೆಳವಣಿಗೆ ಸಾಮಾನ್ಯವಾಗಿ ನೀರಿನಲ್ಲಿ ಅಥವಾ ನೀರಿನ ಅಂಚಿನಲ್ಲಿ. ದೋಣಿಯಾಕಾರದ ಹೂಗಳಂತೆ ಗಿಡದ ಆಕಾರವಿದೆ. ಗಿಡ ಬಲು ಚಿಕ್ಕದು. ಕತ್ತಾಳೆಯಂತಿದೆ. ಎಲೆಗಳ ಬಣ್ಣ ಸಾಮಾನ್ಯವಾಗಿ ಕಪ್ಪು ಮಿಶ್ರಿತ ಕೆಂಪು. ಎಲೆಯ ತೊಟ್ಟಿನ ಪ್ರದೇಶದಲ್ಲಿರುವ ದೋಣಿಯಾಕಾರದ ಆಕೃತಿಗಳನ್ನು ಬಿಡಿಸಿದಾಗ ಒಳಗೆ ಮೊಗ್ಗುಗಳು ಕಾಣುತ್ತವೆ. ಒಂದೊಂದು ದೋಣಿಯಾಕಾರದ ದಳದಲ್ಲಿರುವ ಮೊಗ್ಗುಗಳ ಸಂಖ್ಯೆ ಸುಮಾರು 15-20, ಇಲೋಡಿಯದಲ್ಲಿ ಸುಮಾರು ಹತ್ತು ಜಾತಿಗಳಿವೆ. ಗೊಬ್ಬರಕ್ಕಾಗಿ ಈ ಗಿಡವನ್ನು ಬೆಳೆಸುವುದುಂಟು.						
(ಎ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ